ಮೂರ್ನಾಡುವಿನಲ್ಲಿ ಪುನರ್ ನಿರ್ಮಾಣಗೊಂಡ ನೂತನ‌ ಮದರಸ ಉದ್ಘಾಟನೆ

Posted on: October 11, 2018

WhatsApp Image 2018-10-11 at 9.08.29 AM

ಮಡಿಕೇರಿ  :  ಮೂರ್ನಾಡುವಿನಲ್ಲಿ ಪುನರ್ ನಿರ್ಮಾಣ ಗೊಂಡ ನೂತನ‌ ಮದರಸವನ್ನು ಪಾಣಕ್ಕಾಡ್ ಸಯ್ಯಿದ್ ಅಬ್ಬಾಸಲಿ ಶಿಯಾಬ್ ತಂಙಲ್ ಅವರು ಉದ್ಘಾಟನೆಯನ್ನು ನೆರವೇರಿಸಿದರು.

ನಂತರ ಮಾತನಾಡಿದ ಅವರು
ಕೊಡಗು ಜಿಲ್ಲೆಯು ಪೂರ್ವಿಕರಾದ ಸಜ್ಜನರು, ಉಲಮಗಳು ಮತ್ತು ಇಲ್ಲಿ ಅಂತ್ಯವಿಶ್ರಮ ಪಡೆಯುತ್ತಿರುವ ಔಲಿಯಗಳ ಶ್ರಮದ ಫಲವಾಗಿದೆ ಈ ಕಾಣುವ ಧಾರ್ಮಿಕವಾದ ಭವ್ಯ ಮಂದಿರ ,ಮದರಸ ಮಸೀದಿಗಳು ಶಾಂತಿ ಸೌಹಾರ್ದಯುತವಾಗಿ ಜಿಲ್ಲೆಯಲ್ಲಿ ನೆಲೆ ನಿಂತಿರುವುದು ಎಂದರು.

ಮೂರ್ನಾಡು ಮುಸ್ಲಿಂ ಜಮಾ ಅತ್ತಿನ ಅಧೀನದಲ್ಲಿ ಪುನರ್ ನಿರ್ಮಾಣಗೊಂಡ ನೂತನ ಮದ್ರಸ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾಹ್ ಅಧ್ಯಕ್ಷರಾದ ಮಜೀದ್ ವಹಿಸಿದರು.

ಮೂಹಮ್ಮದ್ ತುರಾಬ್ ಅಸ್ಸಖಾಫ್ ತಂಗಲ್ ಮಾತನಾಡಿ, ಮದರಸ ವಿದ್ಯಾಭ್ಯಾಸವು ವಿದ್ಯಾರ್ಥಿಗಳಿಗೂ, ಪೋಷಕರಿಗೂ ಇಹಪರ ವಿಜಯದ ಮಾರ್ಗವಾಗಿದೆ. ಇಲ್ಲಿ ಯಾವುದೇ ಭೀಕರವಾದಕ್ಕೂ ಅವಕಾಶ ಇರುವುದಿಲ್ಲ .ಸುಂದರವಾದ ಸುಸಂಸ್ಕೃತಿಯ ಸಮಾಜ ನಿರ್ಮಾಣಕ್ಕೆ ಮದರಸ ವಿದುಭ್ಯಾಸವು ಅತೀ ಅಮೂಲ್ಯ ಎಂದು ನುಡಿದರು.

ಕಾರ್ಯಕ್ರಮದಲ್ಲಿ
ಫೀರ್ ಮುಹಮ್ಮದ್ ರಜಬ್ ಅಲಿಖಾನ್ ,ಜಿಲ್ಲೆಯ ಖಾಝಿಗಳಾದ ಮ್ಹಮೂದ್ ಮುಸ್ಲಿಯಾರ್ ,ಅಬ್ದುಲ್ಲಾ ಮುಸ್ಲಿಯಾರ್ , ಸ್ಥಳೀಯ ಖತೀಬರಾದ ಮೂಹಮ್ಮದ್ ರಫ್ಸನ್ ಆಶ್ರಫಿ ,ಮಾಜಿ ಖತೀಬರುಗಳಾದ ಶಾಫಿ ಲತೀಫಿ, ಸಾಜಿದ್ ಸಖಾಫಿ, ಅಡ್ವಕೆಟ್ ಕುಂಞಬ್ದುಲ್ಲ ಮೊದಲಾದವರು ಇದ್ದರು.

ಜಿಲ್ಲೆಯ ಅತ್ಯುತ್ತಮ ಪ್ರೌಢಶಾಲಾ ಶಿಕ್ಷಕರ ಪ್ರಶಸ್ತಿಗೆ ಭಾಜನಾರದ ಹಾಕತ್ತೂರು ಪ್ರೌಢ ಶಾಲಾ ಶಿಕ್ಷಕರಾದ ಮುನೀರ್ ಮಾಸ್ಟರ್ ಮೂರ್ನಾಡು ಅವರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು.

WhatsApp Image 2018-10-11 at 9.07.32 AM

WhatsApp Image 2018-10-11 at 9.07.29 AM

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *