ಬ್ರೇಕಿಂಗ್ ನ್ಯೂಸ್
ಹೈ ಕಮಾಂಡ್ ಸೂಚಿಸಿದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ನಿರ್ಣಯ , ಕೇಂದ್ರದ 546 ಕೋಟಿ ರೂ. 8 ಜಿಲ್ಲೆಗಳಿಗೆ ವಿನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿ , ಕೊಡಗು ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸಿಎಂ , ಅಪರಾಧ ತಡೆಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಕೊಡಗು ಎಸ್‍ಪಿ ಸುಮನ್ ಡಿ.ಪೆನ್ನೇಕರ್ , ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ , ಡಿ. 10ರಿಂದ 21ರವರೆಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಲಭ್ಯ , ಅಯ್ಯಂಡ್ರ ರೋಹಿಣಿ ನಾಣಯ್ಯನವರ ಕುಂಚದಲ್ಲಿ ಅರಳಿದ ಭತ್ತದ ತೆನೆಗೂಡು , ಮಡಿಕೇರಿಯಲ್ಲಿ ಸ್ವಚ್ಛತಾ ಜಾಗೃತಿ ಜಾಥ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಜಯ ಚಿಣ್ಣಪ್ಪ  ಕರೆ  , ಗೌಡ ಜನಾಂಗದ ಕ್ರಿಕೆಟ್ ಪಂದ್ಯಾಟ , ಹಳೇ ವಿದ್ಯಾರ್ಥಿಗಳಿಂದ ಕೊಡುಗೆ ,

ಪರಜಾತಿ ವಿವಾಹದಲ್ಲಿ ಕೊಡವ ಸಂಸ್ಕ್ರತಿಯನ್ನು ಆಚರಿಸುವವರ ವಿರುದ್ಧ ಖಂಡನೆ

Posted on: November 19, 2018

 

Aiyappa-B-Bollajiraಮಡಿಕೇರಿ : ಕೊಡವ ಜನಾಂಗದವರಲ್ಲಿ ಕೆಲವರು ಪರಜಾತಿ ವಿವಾಹವಾಗುತಿರುವುದು ದಿನೇ ದಿನೇ ಕಂಡು ಬರುತಿದೆ. ಕೊಡವ ಹೆಣ್ಣೊಬ್ಬಳು ಪರ ಜನಾಂಗದ ಹುಡುಗನನ್ನು ವಿವಾಹವಾಗುವುದು ವಿವಾಹ ಸಂದರ್ಭ ಕೊಡವ ಉಡುಪು,ಆಚಾರವಿಚಾರವನೆಲ್ಲ ನಡೆಸುವುದ ಜೊತೆಗೆ ಪರ ಜನಾಂಗಕ್ಕೆ ಕೊಡವರ ಸಾಂಪ್ರದಾಯಿಕ ಉಡುಪನ್ನು ಹಾಕಿ ಕೊಡವರಾಗಿ ಹುಟ್ಟಿದವರುಕೊಡವ ಜನಾಂಗಕ್ಕೆ ಅವಮಾಡುತಿರುವುದರ ವಿರುದ್ದ ಕೊಡವ ಮಕ್ಕಡ ಕೂಟದ ಅದ್ಯಕ್ಷ ಬೊಳ್ಳಜಿರ ಬಿ ಅಯ್ಯಪ್ಪ ಹಾಗು ಪದಾಧಿಕಾರಿಗಳು ತೀವ್ರವಾಗಿ ವಿರೋಧಿಸುವ ಬಗ್ಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಳೆದ ಹಲವು ವರ್ಷಗಳಿಂದ ಆಧುನಿಕ ಸಂಸ್ಕ್ರತಿಗೆ ಸಿಲುಕಿ ಕೊಡವ ಜನಾಂಗದಲ್ಲಿ ಕೆಲವರು ಬೇರೆ ಬೇರೆ ಜನಾಂಗದವರನ್ನು ವಿವಾಹವಾಗುತ್ತಿದ್ದು ಕೊಡವ ಜನಾಂಗ ಕ್ಷೀಣಿಸಲು ಇದೊಂದು ಮುಖ್ಯ ಕಾರಣವಾಗಲಿದೆ. ಆದರೆ ಮತ್ತೊಂದೆ ಕೊಡವ ಯುವಕರನ್ನು ವಿವಾಹವಾಗಲು ನಿರಾಕರಿಸಿ ಬೇರೆ ಜನಾಂಗದ ಪುರುಷರನ್ನು ವಿವಾಹವಾಗಲು ಒಪ್ಪಿ ವಿವಾಹ ಸಂದರ್ಭ ಕೊಡವ ಜನಾಂಗದ ಉಡುಪನ್ನು ಅನ್ಯ ಜನಾಂಗದವರಿಗೆ ತೊಡಿಸಿ ಮಜಾ ಮಾಡುವ ಜೊತೆಗೆ ವಿಶಿಷ್ಟ ಪರಂಪರೆ ಹೊಂದಿರುವ ಕೊಡವ ಸಂಸ್ಕ್ರತಿಗೆ ಕಪ್ಪುಚುಕ್ಕೆ ತರುತಿದ್ದಾರೆ.

ಕೊಡವ ಹುಡುಗ ಬೇಡವೆಂದ ಮೇಲೆ ಕೊಡವ ಉಡುಪು,ಕೊಡವ ಸಂಸ್ಕ್ರತಿ, ಆಚಾರ ವಿಚಾರ ಇವರಿಗೇಕೆ ಬೇಕು? ಕುಟುಂಬಸ್ಥರು,ಸಂಬಧಿಕರುಇದಕ್ಕೆ ಸಹಕಾರ ನೀಡುತಿರುವುದು ಎಷ್ಟರ ಮಟ್ಟಿಗೆ ಸರಿ?ಕೊಡವರ ಆಚಾರವಿಚಾರವನ್ನು ನಾಶಮಾಡಲು ಕೊಡವರೇ ಕೈಜೋಡಿಸಿದಂತಾಗಿದೆ ಯಲ್ಲವೇ?
ಕೊಡವ ಮಹಿಳೆಯು ಅನ್ಯ ಜನಾಂಗದ ಪುರುಷನೊಂದಿಗೆನಡೆದ ಅದೆಷ್ಟೋ ವಿವಾಹದಲ್ಲಿ ಕೊಡವ ಉಡುಪನ್ನು ಬಳಸಿರುವುದನ್ನು ಖಂಡಿಸಿ ವಿರೋಧಿಸಿರುವ ಕಾರ್ಯವನ್ನು ಕೊಡವ ಮಕ್ಕಡ ಕೂಟಮಾಡಿದೆ.

ಮುಂದಿನ ದಿನಗಳಲ್ಲಿ ಪರ ಜನಾಂಗದ ವಿವಾಹದಲ್ಲಿ ಕೊಡವ ಉಡುಪು, ಆಚಾರವಿಚಾರ, ಪದ್ಧತಿಯನ್ನು ಆಚರಿಸಿ ಕೊಡವ ಜನಾಂಗಕ್ಕೆ ಅವಮಾನಿಸುವುದನ್ನು ತೀವ್ರವಾಗಿ ವಿರೋಧಿಸುತೇವೆಂದು ತಿಳಿದ್ದಾರೆ.
ಡಿಸಂಬರ್ ತಿಂಗಳಲ್ಲಿ ಕೊಡವ ಹೆಣ್ಣುಮಗಳು ಪರ ಜನಾಂಗದ ಹುಡುಗನನ್ನು ವಿವಾಹವಾಗಲು ಸಿದ್ದರಾಗುತಿದ್ದು ಕೊಡವ ಉಡುಪನ್ನು ವರನಿಗೆ ಧರಿಸಿ ವಿವಾಹ ಕಾರ್ಯವನ್ನು ನಡೆಸುವ ಬಗ್ಗೆ ಮಾಹಿತಿ ಇದ್ದು ಇದೆಲ್ಲ ಕೊಡವ ಜನಾಂಗದ ವಿವಾಹ ಪದ್ಧತಿಗೆ ವಿರೋಧಮಾಡುವ ಕೆಲಸ ಮಾಡುತಿರುವುದು ಸರಿಯಲ್ಲ.
ಕೊಡವರಿಗೆ ಹಾಗು ಕೊಡವ ಭಾಷಿಕ ಜನಾಂಗಕ್ಕೆ ಮಾತ್ರ ಕೊಡವ ಉಡುಪು ಹಾಗು ಸೀರೆಯನ್ನು ಧರಿಸುವ ಅರ್ಹತೆ ಇದ್ದು ಬೇರೆ ಜನಾಂಗದವರು ಹುಡುಪನ್ನು ಧರಿಸಿ ಪ್ರದರ್ಶಿಸಿರುವುದುಖಂಡನೀಯ

.ಕೊಡವ ಆಚಾರವಿಚಾರಕ್ಕೆ ಸಂಭಂದಿಸಿದದುಡಿಕೊಟ್ಟನು ಕೊಡವ ಸಂಸ್ಕ್ರತಿ ಆಚರಣೆಯ ಕಾರ್ಯಕ್ರಮ ಬಿಟ್ಟು ಬೀದಿ ಮೆರಣಿಗೆಯಲ್ಲಿ,ಪ್ರತಿಭಟಣೆಯ ಸಂದರ್ಭ ಬಿಂಬಿಸುವುದು ಸರಿಯೇ? ಕೊಡವ ಜನಾಂಗದವರು ಎಚ್ಚೆತ್ತು ಕೊಳ್ಳದಿದ್ದರೆ ಸಂಸ್ಕ್ರತಿ ಅಳಿದು ಹೋಗುವ ಸಾಧ್ಯವಿದೆಂದರು.

Codava Makkada Coota(R) (1)

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *