ಬ್ರೇಕಿಂಗ್ ನ್ಯೂಸ್
ಹೈ ಕಮಾಂಡ್ ಸೂಚಿಸಿದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ನಿರ್ಣಯ , ಕೇಂದ್ರದ 546 ಕೋಟಿ ರೂ. 8 ಜಿಲ್ಲೆಗಳಿಗೆ ವಿನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿ , ಕೊಡಗು ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸಿಎಂ , ಅಪರಾಧ ತಡೆಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಕೊಡಗು ಎಸ್‍ಪಿ ಸುಮನ್ ಡಿ.ಪೆನ್ನೇಕರ್ , ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ , ಡಿ. 10ರಿಂದ 21ರವರೆಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಲಭ್ಯ , ಅಯ್ಯಂಡ್ರ ರೋಹಿಣಿ ನಾಣಯ್ಯನವರ ಕುಂಚದಲ್ಲಿ ಅರಳಿದ ಭತ್ತದ ತೆನೆಗೂಡು , ಮಡಿಕೇರಿಯಲ್ಲಿ ಸ್ವಚ್ಛತಾ ಜಾಗೃತಿ ಜಾಥ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಜಯ ಚಿಣ್ಣಪ್ಪ  ಕರೆ  , ಗೌಡ ಜನಾಂಗದ ಕ್ರಿಕೆಟ್ ಪಂದ್ಯಾಟ , ಹಳೇ ವಿದ್ಯಾರ್ಥಿಗಳಿಂದ ಕೊಡುಗೆ ,

ಪ್ರೇಕ್ಷಕರ ಮನಗೆದ್ದ ಯುವ ಸೌರಭ

Posted on: November 20, 2018

IMG-20181120-WA0010
ಮಡಿಕೇರಿ : ನಿಸರ್ಗ ಸೌಂದರ್ಯದ ನೆಲೆವೀಡು ಹಚ್ಚಹಸುರಿನ ಕಾನನದ ನಡುವಿನ, ಬೆಟ್ಟಗುಡ್ಡ ಮಧ್ಯ ಇರುವ ಮರಗೋಡು ಗ್ರಾಮದ ಭಾರತೀ ಹೈಸ್ಕೂಲ್ ಸೊಸೈಟಿ ವಿದ್ಯಾಸಂಸ್ಥೆಯಲ್ಲಿ ಕಲೆಗಳ ಕಲರವ, ಕನ್ನಡ ಮತ್ತು ಸಂಸ್ಕೃತಿ  ಇಲಾಖೆಯ ಆಶ್ರಯದಲ್ಲಿ ಆಯೋಜಿಸಿದ್ದ ಯುವ ಸೌರಭ ಕಾರ್ಯಕ್ರಮದಲ್ಲಿ ವಿದ್ವಾನ್ ದಿಲೀಕುಮಾರ್ ರವರ ಶಾಸ್ತ್ರೀಯ ಗಾಯನ, ಸತೀಶ್‍ರವರ ಶಾಸ್ತ್ರೀಯ ವಾದ್ಯ ಸಂಗೀತ ಕೇಳುಗರನ್ನು ಮುಗ್ದರನ್ನಾಗಿ ಮಾಡಿದರೆ, ಕೊಡವ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಬೊಳಕಾಟ್, ಕತ್ತಿಯಾಟ್ ನೃತ್ಯ ಮನಸ್ಸಿಗೆ ಮುದ ನೀಡಿತು.

ಮೈಸೂರು ಜಿಲ್ಲೆ ಸನ್ಯಾಸಪುರ ಯುವಕರಿಂದ ಡೊಳ್ಳುಕುಣಿತ, ನಂಜನಗೂಡಿನ ಕಲಾವಿದರಿಂದ ಕಂಸಾಳೆ, ಶಾಂತಳ್ಳಿ ಗಣೇಶ್‍ರವರ ಕಾವೇರಿ ಮಾತೆ ಹಾಡಿನ ಸೋಗಸಂತೂ ಹೇಳತೀರದು, ಷಡಾಕ್ಷರಯ್ಯ ಜಾನಪದ ಗೀತೆ ಎಲ್ಲೊ ಜೋಗಪ್ಪ ನಿನ್ನ ಅರಮನೆ ಮುಂತಾದ ಗೀತೆಗಳ ಗಾಯನ ತಲೆತೂಗುವಂತಿತ್ತು. ಅಳುವಾರದ ಗಣೇಶ್‍ರವರ ರಂಗಗೀತೆ, ಕೋಲಾಟ ಮುಂತಾದ ನೃತ್ಯಗಳು ನವಿಲು ನೃತ್ಯವನ್ನು ನಾಡಿಸುವಂತಿದ್ದಾರೆ. ಶಿವಮೊಗ್ಗ ಸಾಗರದ ಗುಡ್ಡಪ್ಪ ಸಂಗಡಿಗರ ಜೋಗಿಹಾಡುಗಳು, ಗೀಗೀಪದ, ಜಾನಪದ ಹಾಡುಗಳು ಕಿವಿಗೆ ಇಂಪು ತರುವಂತ್ತಿತ್ತು, ಇವೆಲ್ಲ ಕಾರ್ಯಕ್ರಮಗಳನ್ನು ಸವಿದ ಪ್ರೇಕ್ಷಕರು ಕುಣಿದು ಕುಪ್ಪಳಿಸಿದರು.
ಮರಗೋಡಿನ ಕಾಲೇಜು ಅವಣರದಲ್ಲಿ ಸಂಸ್ಕೃತಿ  ಹಬ್ಬದ ವಾತಾವರಣದಲ್ಲಿ ಕಾರ್ಯಕ್ರಮವನ್ನು ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಬಿದ್ರಪಣಿ ಮೋಹನ್ ಉದ್ಘಾಟಿಸಿ ಮಾತನಾಡಿ ಸಾಹಿತ್ಯ ಸಂಸ್ಕೃತಿ  ಜನಪದ ವಿಚಾರಗಳನ್ನು ಮೈಗೂಡಿಸಿಕೊಳ್ಳುವುದರೊಂದಿಗೆ ಜ್ಞಾನದ ಸಂಪಾದನೆಗೆ ಜಾನಪದ ಸಂಸ್ಕೃತಿ  ಮೂಲ ಎಂದರು.

ಸಮಾಜದ ನಮ್ಮ ಪುರಾತನ ಪ್ರಾಚೀನ ಕಲೆಗಳು ಸಾಹಿತ್ಯಗಳು ಮರೆಯಾಗುತ್ತಿದ್ದು, ಅವುಗಳ ಶ್ರೆಯೋಭಿವೃದ್ಧಿಗೆ ಕೈಜೋಡಿಸಬೇಕು. ಶಾಸ್ತ್ರೀಯ ಸಂಗೀತ, ವಾದ್ಯ ಸಂಗೀತಕ್ಕೆ ತಮ್ಮದೆ ಆದ ಚರಿತ್ರೆ ಇದ್ದು, ಅವುಗಳು ಕಾಲ ಬದಲಾದಂತೆ ಅಂತಹ ಕಲೆಗಳ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿರುವುದು ಬೇಸರ ತಂದಿದೆ. ಭಾಷೆ ಸಾಹಿತ್ಯದ ಬೆಳವಣಿಗೆಗೆ ಸಂಸ್ಕೃತಿ  ಪೂರಕ ಎಂದರು.
ಸಂಸ್ಕೃತಿ  ಸಮಾಜದ ಪ್ರತಿರೂಪ ಶಿಕ್ಷಣದೊಂದಿಗೆ ವಿನಯವನ್ನು ಮೈಗೂಡಿಸಿಕೊಳ್ಳಲು ವಿದ್ಯಾರ್ಥಿಗಳು ಯುವ ಸಮೂಹ ಇಂದು ಸಾಂಸ್ಕೃತಿಕ ಕ್ಷೇತ್ರದಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು ಎಂದರು.
ಸಂಸ್ಕøತಿಯಿಂದ ಸರಳತೆ, ಸಜ್ಜನಿಕತೆ ಸಾಮಾಜಿಕ ಕಳಕಳಿಯನ್ನು ಮೈಗೂಡಿಸಿಕೊಳ್ಳಬಹುದು ಎಂದರು. ಹಿಂದಿನ ತಲೆಮಾರಿನವರು ತಮ್ಮ ಬದುಕಿನ ಅನುಭವವನ್ನು ಜನಪದ ಹಾಡಿನ ಸೊಗಡಿನ ಮೂಲಕ ಸಾರಿದ್ದಾರೆ. ಹಲವು ಜಾನಪದ ವಿದ್ವಾಂಸರು ಮಾನವ ಜೀವನಕ್ಕೆ ಬೇಕಾದ ಮಾನವೀಯ ಮೌಲ್ಯಗಳನ್ನು ಸಾಹಿತ್ಯದ ರೂಪದಲ್ಲಿ ಸಾರಿದ್ದಾರೆ. ತಮ್ಮ ಸಾಹಿತ್ಯ ಸಂಸ್ಕ್ರತಿಯನ್ನು ಸಧಬಿರುಚಿಯನ್ನು ಬೆಳಸಿಕೊಳ್ಳುವುದರೊಂದಿಗೆ ನಮ್ಮ ಪರಿಸರ ಪ್ರಕೃತಿ ಉಳಿಸಲು ವಿದ್ಯಾರ್ಥಿಗಳು ಪ್ರತಿಯೊಬ್ಬರು ಶ್ರಮಿಸಬೇಕು ಎಂದರು.

ಕನ್ನಡ ಮತ್ತು ಸಂಸ್ಕೃತಿ  ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಟಿ.ದರ್ಶನ ಪ್ರಾಸ್ತಾವಿಕ ಮಾತನಾಡಿ ಸಂಸ್ಕೃತಿ  ಸಾಹಿತ್ಯ ಮನಸ್ಸಿಗೆ ಆಹ್ಲಾದಕರವಾಗಿ ಆರೋಗ್ಯಕ್ಕೆ ಮಾನಸಿಕ ಒತ್ತಡಗಳನ್ನು ಕಡಿಮೆ ಮಾಡಿ ನೆಮ್ಮದಿಗೆ ಪೂರಕವಾಗಿ ಜೀವನ ಮಾಡಲು ಕಲೆ ಸಹಕಾರಿಯಾಗಬಲ್ಲದು, ಅಂತಹ ಕಲೆ, ಸಾಹಿತ್ಯಸಂಸ್ಕೃತಿಯನ್ನು ವಿದ್ಯಾರ್ಥಿ ದಿಸೆಯಲ್ಲಿ ಬೆಳೆಸಿಕೊಳ್ಳಬೇಕು. ಶಿಕ್ಷಣದೊಂದಿಗೆ ಕ್ರೀಡೆ, ಸಂಗೀತ ಸಾಹಿತ್ಯವನ್ನು ಮೈಗೂಡಿಸಿಕೊಂಡಾಗ ಉತ್ತಮ ಸಮಾಜದ ನಾಗರೀಕರಾಗಿ ದೇಶದ ಸತ್ಪ್ರಜೆಯಾಗಬಹುದು ಎಂದರು.

ಕಾಫಿ ಪ್ಲಾಂಟರ್, ಸಾಂಬಾರ ಮಂಡಳಿ ನಿವೃತ್ತ ಅಧಿಕಾರಿ ಚೆಟ್ಟಳ್ಳಿಯ ಗಿರೀಶ್‍ಕುಮಾರ್ ಮಾತನಾಡಿ ನಮ್ಮದೇ ಆದ ಸಂಸ್ಕೃತಿ ಆಚಾರ ವಿಚಾರಗಳಿದ್ದು, ಕಲೆಗಳ ವಿನಿಮಯವಾದಾಗ ಬೇರೆ ಬೇರೆ ಜನಾಂಗದ ಸಂಸ್ಕೃತಿಯನ್ನು ನಾವು ಅರಿಯಲು ಸಹಕಾರಿಯಾಗುತ್ತದೆ. ಅದರಲ್ಲೂ ಜಾನಪದ ಹಾಡುಗಳು ಪ್ರಾಚೀನ ನಾಡಿನ ಪದಗಳು ಇಂದಿನ ಸಮಾಜಕ್ಕೆ ಪ್ರಸ್ತುತ ಕಲಾವಿದರುಗಳು ಹಾಡಿನ ಮೂಲಕ ಅನೇಕ ವಿಚಾರಗಳನ್ನು ತಿಳಿಸಿಕೊಡುವಲ್ಲಿ ಸಫಲರಾಗಿದ್ದಾರೆ. ಇಂತಹ ಹಾಡುಗಳನ್ನು ಕೇಳುವುದೇ ಆನಂದಮಯ ಎಂದರು.

ಎ.ಸಿ.ರಾಘವಯ್ಯ ಮಾತನಾಡಿ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಗ್ರಾಮಾಂತರ ಪ್ರದೇಶಗಳಲ್ಲಿ ನಡೆಯುವುದು ಸಮಯೋಚಿತ ಎಂದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆಂಚಪ್ಪ ಮಾತನಾಡಿ ಹಿಂದಿನ ಪ್ರಾಚೀನ ಕಲೆಗಳಾದ ಪೌರಾಣಿಕ ನಾಟಕ, ಸೋಬಾನೆ ಪದಗಳು ನಶಿಸುವ ಸಂದರ್ಭದಲ್ಲಿ ಇಂತಹ ಕಾರ್ಯಕ್ರಮಗಳ ಮೂಲಕ ಪುನಶ್ಚೇತನ ನೀಡಲು ಸಹಕಾರಿ ಎಂದರು.
ಮರಗೋಡು ಭಾರತೀ ಸಂಯುಕ್ತ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಎಚ್.ಬಿ.ಬೆಳ್ಳಿಯಪ್ಪ ಮಾತನಾಡಿ ನಮ್ಮ ನಾಡಿನ ಹಿರಿಮೆ ಗರಿಮೆ ಎತ್ತಿ ಹಿಡಿಯಲು ತಾವೆಲ್ಲರೂ ನಾಡುನುಡಿ ಬಗ್ಗೆ ಭಾಷಾಭಿಮಾನ ಬೆಳೆಸಿಕೊಳ್ಳಬೇಕೆಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಾವಿದರಿಂದ ನಾಡಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಮಣಜೂರು ಮಂಜುನಾಥ್ ನಿರೂಪಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಟಿ.ದರ್ಶನ ಸ್ವಾಗತಿಸಿದರು. ಪ್ರಾಂಶುಪಾಲರಾದ ಬೆಳ್ಳಿಯಪ್ಪ ಅವರು ವಂದಿಸಿದರು.

IMG-20181120-WA0020

IMG-20181120-WA0018

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *