ಬ್ರೇಕಿಂಗ್ ನ್ಯೂಸ್
ಹೈ ಕಮಾಂಡ್ ಸೂಚಿಸಿದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ನಿರ್ಣಯ , ಕೇಂದ್ರದ 546 ಕೋಟಿ ರೂ. 8 ಜಿಲ್ಲೆಗಳಿಗೆ ವಿನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿ , ಕೊಡಗು ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸಿಎಂ , ಅಪರಾಧ ತಡೆಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಕೊಡಗು ಎಸ್‍ಪಿ ಸುಮನ್ ಡಿ.ಪೆನ್ನೇಕರ್ , ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ , ಡಿ. 10ರಿಂದ 21ರವರೆಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಲಭ್ಯ , ಅಯ್ಯಂಡ್ರ ರೋಹಿಣಿ ನಾಣಯ್ಯನವರ ಕುಂಚದಲ್ಲಿ ಅರಳಿದ ಭತ್ತದ ತೆನೆಗೂಡು , ಮಡಿಕೇರಿಯಲ್ಲಿ ಸ್ವಚ್ಛತಾ ಜಾಗೃತಿ ಜಾಥ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಜಯ ಚಿಣ್ಣಪ್ಪ  ಕರೆ  , ಗೌಡ ಜನಾಂಗದ ಕ್ರಿಕೆಟ್ ಪಂದ್ಯಾಟ , ಹಳೇ ವಿದ್ಯಾರ್ಥಿಗಳಿಂದ ಕೊಡುಗೆ ,

ಮೂರ್ನಾಡು ವಲಯ ಕಾಂಗ್ರೆಸ್ ಅಧ್ಯಕ್ಷರಾಗಿ ಪೊನ್ನು ಮುತ್ತಪ್ಪ

Posted on: November 19, 2018

Z MURNADU CONGRESS

ಮಡಿಕೇರಿ  : ಮೂರ್ನಾಡು ವಲಯ ಕಾಂಗ್ರೆಸ್ ಅಧ್ಯಕ್ಷರಾಗಿ ಪೊನ್ನು ಮುತ್ತಪ್ಪ ಅವರನ್ನು ಆಯ್ಕೆ ಮಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಪ್ರುರವೀಂದ್ರ ಆದೇಶ ಪತ್ರ ನೀಡಿದರು. ಕಳೆದ 8 ವರ್ಷಗಳಿಂದ ವಲಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಮುಂಡಂಡ ಭಾಗೇಶ್ ಅವರು ರಾಜಿನಾಮೆ ನೀಡಿದ್ದು, ತೆರವಾಗಿದ್ದ ಸ್ಥಾನಕ್ಕೆ ಪೊನ್ನುಮುತ್ತಪ್ಪ ಅವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭ ಮಾತನಾಡಿದ, ಅಪ್ರುರವೀಂದ್ರ ಮೂರ್ನಾಡು ಭಾಗದಲ್ಲಿ ಭಾಗೇಶ್ ಅವರು ಬಹಳಷ್ಟು ಪಕ್ಷದ ಸಂಘಟನೆಯನ್ನು ಮಾಡಿದ್ದು, ಅವರನ್ನು ಜಿಲ್ಲಾ ಸಮಿತಿಗೆ ನೇಮಕ ಮಾಡಲು ಶಿಫಾರಸ್ಸು ಮಾಡಲಾಗಿದೆ ಎಂದು ತಿಳಿಸಿದರು.

ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕ ತೆನ್ನಿರಾ ಮೈನಾ ಮಾತನಾಡಿ ವಲಯ ಸಮಿತಿ ಮತ್ತು ಬೂತ್ ಸಮಿತಿಗಳ ಭದ್ರ ಬುನಾದಿಯಲ್ಲಿ ಕಾಂಗ್ರೆಸ್ ಪಕ್ಷ ಪ್ರಬಲವಾಗಿದೆ ಎಂದರು. ಅಪ್ರುರವೀಂದ್ರ ಅವರು ಅಧ್ಯಕ್ಷರಾದ ಪ್ರಾರಂಭದಿಂದಲೇ ವಲಯ ಸಮಿತಿ ಮತ್ತು ಬೂತ್ ಸಮಿತಿಗಳ ರಚನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವುದರಿಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮಡಿಕೇರಿ ಬ್ಲಾಕ್‍ನಲ್ಲಿ ಹೆಚ್ಚಿನ ಮತಗಳನ್ನು ಪಡೆಯಲು ಸಾಧ್ಯವಾಯಿತು ಎಂದು ಅಭಿಪ್ರಾಯಪಟ್ಟರು.
ನಿರ್ಗಮಿತ ಅಧ್ಯಕ್ಷ ಮುಂಡಂಡ ಭಾಗೇಶ್ ಅವರನ್ನು ಸನ್ಮಾನಿಸಿ, ನೂತನ ಅಧ್ಯಕ್ಷರನ್ನು ಸಭೆಯಲ್ಲಿ ಅಭಿನಂದಿಸಲಾಯಿತು.

ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಕೊಟ್ಟಮುಡಿ ಹಂಸ, ಗ್ರಾ.ಪಂ ಸದಸ್ಯರಾದ ಮೀನಾಕ್ಷಿ ಕೇಶವ, ಈರಸುಬ್ಬ, ನಂದಕುಮಾರ್, ರಾಣಿ, ಮಹಮ್ಮದ್ ಆಲಿ, ಧನಂಜಯ, ಶಿವಕುಮಾರ್, ಸಮೀರ್, ಅಬ್ಬುಬಕರ್, ಜಿ.ಪಂ ಪರಾಜಿತ ಅಭ್ಯರ್ಥಿ ಭಾರತಿ ಅಣ್ಣು ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.
ಯುವ ಕಾಂಗ್ರೆಸ್ ವಲಯ ಅಧ್ಯಕ್ಷ ಸೈಫ್‍ಆಲಿ ಕಾರ್ಯಕ್ರಮ ನಿರೂಪಿಸಿದರು. ಫೋಟೋ :: ಮೂರ್ನಾಡು ಕಾಂಗ್ರೆಸ್

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *