ಬ್ರೇಕಿಂಗ್ ನ್ಯೂಸ್
ಹೈ ಕಮಾಂಡ್ ಸೂಚಿಸಿದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ನಿರ್ಣಯ , ಕೇಂದ್ರದ 546 ಕೋಟಿ ರೂ. 8 ಜಿಲ್ಲೆಗಳಿಗೆ ವಿನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿ , ಕೊಡಗು ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸಿಎಂ , ಅಪರಾಧ ತಡೆಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಕೊಡಗು ಎಸ್‍ಪಿ ಸುಮನ್ ಡಿ.ಪೆನ್ನೇಕರ್ , ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ , ಡಿ. 10ರಿಂದ 21ರವರೆಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಲಭ್ಯ , ಅಯ್ಯಂಡ್ರ ರೋಹಿಣಿ ನಾಣಯ್ಯನವರ ಕುಂಚದಲ್ಲಿ ಅರಳಿದ ಭತ್ತದ ತೆನೆಗೂಡು , ಮಡಿಕೇರಿಯಲ್ಲಿ ಸ್ವಚ್ಛತಾ ಜಾಗೃತಿ ಜಾಥ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಜಯ ಚಿಣ್ಣಪ್ಪ  ಕರೆ  , ಗೌಡ ಜನಾಂಗದ ಕ್ರಿಕೆಟ್ ಪಂದ್ಯಾಟ , ಹಳೇ ವಿದ್ಯಾರ್ಥಿಗಳಿಂದ ಕೊಡುಗೆ ,

ಶಟಲ್ ಪಂದ್ಯಾಟ ಇರ್ಷಾದ್ ತಂಡ ಪ್ರಥಮ ನೀಲ್ ಬೋಬಿ ತಂಡ ದ್ವಿತೀಯ

Posted on: November 19, 2018

WhatsApp Image 2018-11-19 at 2.23.19 PM
ಮಡಿಕೇರಿ : ಚೆಟ್ಟಳ್ಳಿ ಸಮೀಪದ ಕಂಡಕರೆಯ ಬ್ರೈಟ್ ಸ್ಪೋರ್ಟ್ಸ್ ಮತ್ತು ರಿಕ್ರಿಯೇಶನ್ ಕ್ಲಬ್ ಇವರ ವತಿಯಿಂದ ನಡೆದ ಹೊನಲು ಬೆಳಕಿನ ಶಟಲ್ ಪಂದ್ಯಾವಳಿಯಲ್ಲಿ ಇರ್ಷಾದ್ ಹಾಗೂ ಹರ್ಷಾದ್, ಪ್ರಥಮ ಸ್ಥಾನ ಪಡೆದರೆ, ದ್ವೀತಿಯ ಸ್ಥಾನವನ್ನು ನೀಲ್ ಬೋಬಿ ಹಾಗೂ ಸಿದ್ದಾರ್ಥ್ ಪಡೆದುಕೊಂಡರು.
ಪಂದ್ಯಾವಳಿಯಲ್ಲಿ ೩೦ ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು. ಮೊದಲನೇ ಸೆಮಿಫೈನಲ್ ಪಂದ್ಯವು ಇರ್ಷಾದ್ ತಂಡ ಹಾಗೂ ಕುಶಾಲನಗರ ತಂಡಗಳ ನಡುವೆ ನಡೆಯಿತು. ಇರ್ಷಾದ್ ತಂಡವು ೨-೦ ಸೆಟ್ ಗಳಿಂದ ವಿಜಯಗಳಿಸಿ ಫೈನಲ್ ಪ್ರವೇಶಿಸಿದರು. ದ್ವಿತೀಯ ಸೆಮಿಫೈನಲ್ ಪಂದ್ಯವು ನೀಲ್ ಬೋಬಿ ತಂಡ ಹಾಗೂ ಅಣ್ಣಯ್ಯ ತಂಡಗಳ ನಡುವೆ ನಡೆಯಿತು. ನೀಲ್ ಬೋಬಿ ತಂಡವು ೨-೦ ಸೆಟ್ ಗಳಿಂದ ವಿಜಯಗಳಿಸಿ ಫೈನಲ್ ಪ್ರವೇಶಿಸಿದರು.
ಎರಡು ಬಲಿಷ್ಠ ತಂಡಗಳ ನಡುವಿನ ಫೈನಲ್ ಪಂದ್ಯಾಟವು ಬಹಳ ರೋಜಕತೆಯಿಂದ ಕೂಡಿತ್ತು.
ನೀಲ್ ಬೋಬಿ ತಂಡವನ್ನು, ಇರ್ಷಾದ್ ತಂಡವು ೨೧-೨೦, ೨೧-೧೭ ಎರಡು ನೇರ ಸೆಟ್ ಗಳಿಂದ ಪರಾಜಯಗೊಳಿಸಿ ಪ್ರಥಮ ಸ್ಥಾನ ಪಡೆದರು, ನೀಲ್ ಬೋಬಿ ತಂಡವು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕ್ಲಬ್ ನ ಅಧ್ಯಕ್ಷರಾದ ಮನ್ಸೂರ್ ವಹಿಸಿದರು.ಈ ಸಂದರ್ಭ ಕಾರ್ಯದರ್ಶಿ ಆರಿಫ್ , ಪ್ರಮುಖರಾದ ನೌಷಾದ್, ಉಪಾಧ್ಯಕ್ಷರಾದ ಸುಹೈಲ್, ಸೌಕತ್, ಲೋಕೇಶ್, ಫಾರೂಖ್, ಮತ್ತಿತ್ತರರು ಉಪಸ್ಥಿತರಿದ್ದರು.

ಪಂದ್ಯಾಟದ ತೀರ್ಪುಗಾರರಾಗಿ, ಸೌಕತ್, ಅಣ್ಣಯ್ಯ, ಲೋಕೇಶ್, ಹರ್ಷಾದ್ ಹಾಗೂ ಸ್ಕೋರ್ ಬೋರ್ಡ್ ಪ್ರಮುಖರಾಗಿ ಫಾರೂಖ್ ಕಾರ್ಯನಿರ್ವಹಿಸಿದರು. ಸೌಕತ್ ಸ್ವಾಗತಿಸಿ, ಲೋಕೇಶ್ ವಂದಿಸಿದರು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *