ಬ್ರೇಕಿಂಗ್ ನ್ಯೂಸ್
ಹೈ ಕಮಾಂಡ್ ಸೂಚಿಸಿದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ನಿರ್ಣಯ , ಕೇಂದ್ರದ 546 ಕೋಟಿ ರೂ. 8 ಜಿಲ್ಲೆಗಳಿಗೆ ವಿನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿ , ಕೊಡಗು ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸಿಎಂ , ಅಪರಾಧ ತಡೆಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಕೊಡಗು ಎಸ್‍ಪಿ ಸುಮನ್ ಡಿ.ಪೆನ್ನೇಕರ್ , ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ , ಡಿ. 10ರಿಂದ 21ರವರೆಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಲಭ್ಯ , ಅಯ್ಯಂಡ್ರ ರೋಹಿಣಿ ನಾಣಯ್ಯನವರ ಕುಂಚದಲ್ಲಿ ಅರಳಿದ ಭತ್ತದ ತೆನೆಗೂಡು , ಮಡಿಕೇರಿಯಲ್ಲಿ ಸ್ವಚ್ಛತಾ ಜಾಗೃತಿ ಜಾಥ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಜಯ ಚಿಣ್ಣಪ್ಪ  ಕರೆ  , ಗೌಡ ಜನಾಂಗದ ಕ್ರಿಕೆಟ್ ಪಂದ್ಯಾಟ , ಹಳೇ ವಿದ್ಯಾರ್ಥಿಗಳಿಂದ ಕೊಡುಗೆ ,

ಸಮಾಜ ಮುಖಿಗೆ ವಚನ ಸಾಹಿತ್ಯದ ಕೊಡುಗೆ ಅಪಾರ

Posted on: November 20, 2018

IMG-20181120-WA0024

ಮಡಿಕೇರಿ : ಬಸವಣ್ಣನವರ ಕಾಲದ ವಚನಗಳು ಇಂದಿನ ಸಮಾಜದ ತಿದ್ದುಪಡಿಗೆ ದಾರಿದೀಪವಾಗಿದ್ದು, 12ನೇ ಶತಮಾನದ ವಚನಗಳು ಇಂದು ಪುಸ್ತುತ ಎಂದು ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹದೇವಪ್ಪ ತಿಳಿಸಿದರು.

ಕುಶಾಲನಗರದ ಸೋಮೇಶ್ವರ ಬಡವಾಣೆಯ ನಾಗೇಗೌಡರ ಮನೆಯಂಗಳದಲ್ಲಿ ಹಮ್ಮಿಕೊಂಡಿದ್ದ ಶ್ರೀ ಚನ್ನಬಸವ ಸ್ವಾಮಿಜಿ ಧತ್ತಿನಿಧಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು 12ನೇ ಶತಮಾನದಲ್ಲಿ ಅಂದಿನ ಯುಗಪುರುಷರು ಸಮಾಜದ ಉದ್ಧಾರಕ್ಕಾಗಿ ವಚನವನ್ನು ಕೊಡುಗೆಯಾಗಿ ನೀಡಿದ್ದಾರೆ. ಅಂಧಾಕಾರದ ಮೂಡನಂಬಿಕೆಗಳನ್ನು ತೊಲಗಿಸಲು ವಚನಗಳು ತುಂಬಾ ಪ್ರಭಾವ ಬೀರಿದೆ ಎಂದರು. ಜಾತಿ ಮತ ಭೇದ ಭಾವ ತೊಲಗಿಸಲು ಅಂದಿನ ವಚನ ಸಾಹಿತ್ಯ ಇಂದಿಗೂ ದಾರಿದೀಪಗಳಾಗಿವೆ. ನಾಡಿನ ಉದ್ದಗಲಕ್ಕೆ ವಚನ ಸಾಹಿತ್ಯ ಪ್ರಮುಖ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿವೆ ಎಂದರು.

ಮಣಜೂರು ಮಂಜುನಾಥ್ ಮಾತನಾಡಿ ಶರಣರ ಕ್ರಾಂತಿಯಲ್ಲಿ 12ನೇ ಶತಮಾನದ ಮುಂಚೂಣಿಯಲ್ಲಿದ್ದು ಬಸವಣ್ಣನವರು ವಚನ ಸಾಹಿತ್ಯದಲ್ಲಿ ಮಹಾಕ್ರಾಂತಿ ಮಾಡಿದವರು. ಬಸವಣ್ಣವರು 12ನೇ ಶತಮಾನದಲ್ಲಿ ಅನುಭವ ಮಂಟಪವನ್ನು ಸ್ಥಾಪಿಸಿ ಇಂದಿನ ಸಂಸತ್ತು ಏನು ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟವರು ಬಸವಣ್ಣನವರು. ಬಹುತೇಕ ಸಮಾಜದ ಕೊಳೆಯನ್ನು ಅಳಿಸಲು ವಚನಗಳು ಆಧಾರಸ್ತಂಭವಾಗಿದೆ ಎಂದರು.

ಧತ್ತಿ ಕಾರ್ಯಕ್ರಮದ ಅಂಗವಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಜೋಗಿ ಗುಡ್ಡಪ್ಪ ತಂಡದವರು ನಡೆಸಿಕೊಟ್ಟ ವಚನ, ತತ್ವಪದ, ಲಾವಣಿ ಜಾನಪದ ಗೀತೆಗಳು ಪ್ರೇಕ್ಷಕರ ಮನೆಸೂರೆಗೊಂಡವು, ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲರಾದ ಹೆಚ್.ಎನ್.ನಾಗಾಚಾರಿ, ನಾಗೇಗೌಡ.ಎಂ.ಎನ್.ಮೂರ್ತಿ.ಟಿ.ಜಿ, ಪ್ರೇಂ ಕುಮಾರ್, ಪ್ರವೀಣ್, ಗೊಂದಿಬಸವನಹಳ್ಳಿ ಶಾಲಾ ಮುಖ್ಯ ಶಿಕ್ಷಕಿ ಎಸ್.ಕೆ.ಜಲಜಾಕ್ಷಿ, ಶಿಕ್ಷಕ ಶಶಿಕುಮಾರ್, ಪ್ರಕಾಶ್, ಮಂಜುನಾಥ್, ಅಕ್ಕನ ಬಳಗದ ಸದಸ್ಯರು ಹಾಜರಿದ್ದರು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *